Adhyatmikate - Hale Beru Hosa Chiguru (Kannada e-book download)
ಸದ್ಗುರುವಿನಲ್ಲಿ ಆಧ್ಯಾತ್ಮಿಕತೆ, ವಿಜ್ಞಾನದೊಂದಿಗೆ ಮೇಳೈಸಿಕೊಂಡಿರುವಂತೆ ಅವರ ಕಾರ್ಯಗಳಲ್ಲೂ ಮೇಳೈಸಿದೆ. ಸದ್ಗುರುಗಳೊಂದಿಗೆ ನಡೆದ ಸತ್ಸಂಗಗಳಲ್ಲಿ ಜನರು ಕೇಳಿದ ಪ್ರಶ್ನೆಗಳಿಗೆ ಸದ್ಗುರುಗಳು ನೀಡಿದ ಉತ್ತರದ ಕಿರು ಉಪನ್ಯಾಸಗಳನ್ನು ಐದು ಅಧ್ಯಾಯಗಳಲ್ಲಿ ಓದುಗರೊಡನೆ ಹಂಚಿಕೊಳ್ಳುವ ಪ್ರಯತ್ನವು ಪುಸ್ತಕವಾಗಿ ಹೊರಬಂದಿದೆ. ಎಲ್ಲ ಜನರ ಪ್ರಶ್ನೆಗಳನ್ನು ಉತ್ತರಿಸುವಲ್ಲಿ ಎದ್ದು ಕಾಣುವ ಅಂಶವೆಂದರೆ ಸದ್ಗುರುವಿನ ಆತ್ಮೀಯತೆ-ವಾತ್ಸಲ್ಯ. ಅವರದೇ ವಿಶಿಷ್ಟ ರೀತಿಯಲ್ಲಿ ವ್ಯಕ್ತಿಯ ಪ್ರಶ್ನೆಗಳಿಗೆ ಮಾತ್ರ ಸ್ಪಂದಿಸದೆ, ಉತ್ತರದ ಮೂಲಕ ವ್ಯಕ್ತಿಯೊಳಗಿನ ಜೀವಮಾತ್ರನನ್ನು ತಟ್ಟಿ ಎಬ್ಬಿಸುವುದು ಅವರ ಉದ್ದೇಶವೆನಿಸುತ್ತದೆ. ಪ್ರಶ್ನೆಯ ರೂಪವೇನೇ ಇದ್ದರೂ, ಒಳಗೊಳಗೆ ಮಿಡಿಯುತ್ತಿರುವ ಅಸ್ತಿತ್ವದ ಏಕತೆಯನ್ನು ವ್ಯಕ್ತಿಗೆ ಪರಿಚಯಿಸುವ ಉದ್ದೇಶ ಇಲ್ಲಿರುವುದು ಸ್ಪಷ್ಟ.
ಇದರೊಂದಿಗೆ, “ಜೀವನ ಮತ್ತು ಮರಣವೆಂಬುದು ಭಿನ್ನವಲ್ಲ. ಈ ಕ್ಷಣ ನೀವು ಜೀವಿಸಿದ್ದೀರಿ. ಆದರೆ ವಾಸ್ತವವಾಗಿ ನೀವು ನಿಧಾನವಾಗಿ ಸಾಯುತ್ತಿದ್ದೀರೆಂದು ಹೇಳಬಹುದು. ಒಂದು ದಿನ ಆ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ…” ಎನ್ನುತ್ತಾ ಜೀವನದಲ್ಲಿ ಸಾವು, ಸಾವಿನಲ್ಲಿಯೂ ಜೀವನವನ್ನು ಕಾಣುವ ಆಧ್ಯಾತ್ಮಿ ಸದ್ಗುರುಗಳೊಡನೆ ಕಳೆವ ಒಂದೊಂದು ಕ್ಷಣವೂ ಸತ್ಸಂಗವೇ!
145 Pages
SKU # | D-BK-ADHYATMIKATE |
---|