https://www.rpspharmacy.com/product/malegra-fxt/

ವಿಕಸನ – ಸಾಮಾನ್ಯದಿಂದ ಅಸಾಮಾನ್ಯದತ್ತ [Vikasana – Samanyadinda Asamanyadatta]

ಸಾಮಾನ್ಯವಾಗಿ, ಪ್ರತಿಯೊಬ್ಬರಿಗೂ ಬಾಲ್ಯದಿಂದಲೇ ತಾನು ಅಸಾಮಾನ್ಯನಾಗಬೇಕು, ಇತರರೊಡನಿದ್ದಾಗ ತನ್ನನ್ನು ಎಲ್ಲರೂ ಗಮನಿಸಬೇಕು ಎಂಬ ಹಂಬಲ ಇರುತ್ತದೆ. ತಮ್ಮ ವಿಶೇಷತೆಯನ್ನು ಬೆಳೆಸಿಕೊಳ್ಳುವುದು ಜೀವನದ ಮುಖ್ಯಧ್ಯೇಯವಾಗುವುದು. ಕೆಲವರು ಧನವಂತರಾದರೆ ಕೆಲವರು ವಿದ್ಯಾವಂತರು, ಹಲವರು ಬಲಾಢ್ಯರು; ಮತ್ತೆ ಕೆಲವರು ಹೆಸರಾಂತ ಕಲಾಕಾರರು, ಆಟಗಾರರು, ವೇದಾಂತಿಗಳು, ಹಠಯೋಗಿಗಳು ಒಂದಲ್ಲ ಒಂದು ಬಗೆಯಲ್ಲಿ ಅಸಾಮಾನ್ಯತೆಯನ್ನು ಪಡೆಯುವ ಮತ್ತು ಅದನ್ನು ಪ್ರದರ್ಶಿಸುವ ಕಾರ್ಯದಲ್ಲಿ ತೊಡಗಿರುತ್ತಾರೆ. ಅಸಾಮಾನ್ಯನಾಗುವ ಹಂಬಲವನ್ನು ಈಡೇರಿಸಿಕೊಳ್ಳಲು ತನ್ನ ಸಮಾಜವನ್ನು, ಪರಿಸರವನ್ನು ಅವಲಂಬಿಸುವುದು ಸಾಮಾನ್ಯ.

ಸಾಮಾನ್ಯರಾಗಿ ಹುಟ್ಟಿದ ನಾವು ಅಸಾಮಾನ್ಯರಾಗುವವರೆಗೆ ಪ್ರತಿಯೊಬ್ಬರೂ ವಿಕಾಸಗೊಳ್ಳಬೇಕು. ಈ ಜನ್ಮದಲ್ಲಿಯೇ ಅದು ಸಾಧ್ಯವೂ ಕೂಡ ಎನ್ನುವ ವಿಚಾರವೇ ಮನನೀಯ. ಇದನ್ನೇ ಹತ್ತು ಹಲವು ವಿಧದಲ್ಲಿ ಸ್ಪಷ್ಟಪಡಿಸಲು ಸದ್ಗುರುಗಳ ಉಪನ್ಯಾಸಗಳ ಸಂಗ್ರಹವಾದ ’ವಿಕಸನ – ಸಾಮಾನ್ಯದಿಂದ ಅಸಾಮಾನ್ಯದತ್ತ’ ಎಂಬ ಪುಸ್ತಕ ಪ್ರಯತ್ನಿಸುತ್ತದೆ.

http://www.wolfesimonmedicalassociates.com/zenegra/