https://www.rpspharmacy.com/product/malegra-fxt/

ಜ್ಞಾನೋದಯ – ಅರಿವಿನತ್ತ ಹೊಸ ಹೆಜ್ಜೆಗಳು [Gnandaya Arivinatta Hosa Hejjegalu]

ಸದ್ಗುರು ಅವರು ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಎಲ್ಲ ಮಕ್ಕಳಂತೆ ಇವರೂ ಬೆಳೆದರು. ಅಪ್ಪ-ಅಮ್ಮ ದೈವಭಕ್ತರಾಗಿದ್ದರೂ ಎಳೆ ವಯಸ್ಸಿನಲ್ಲಿ ಈ ಮಗನಿಗೆ ದೇವರು, ಅಧ್ಯಾತ್ಮ ಮುಂತಾದ ವಿಷಯಗಳಲ್ಲಿ ಏನೇನೂ ಆಸಕ್ತಿ ಇರಲಿಲ್ಲ. ಏಟು ತಿಂದರೂ ಸರಿ, ದೇವರ ದರ್ಶನಕ್ಕೆಂದು ಅಂಗಿ ಮಾತ್ರ ಬಿಚ್ಚುವುದಿಲ್ಲ ಎಂಬಂಥ ಹಠಮಾರಿ. ಯೌವನಕ್ಕೆ ಕಾಲಿಟ್ಟಾಗಲೂ ಆಷ್ಟೆ, ಜೀನ್ಸ್ ತೊಟ್ಟು, ಬೀಟಲ್ಸ್ ಸಂಗೀತಕ್ಕೆ ಕಿವಿಗೊಟ್ಟು, ಪಾಶ್ಚಾತ್ಯ ಸಂಸ್ಕೃತಿಯೇ ಪರಮ ಆದರ್ಶವೆಂದು ಬಿಂಬಿಸುವ ಇಂಗ್ಲಿಷ್ ಶಿಕ್ಷಣ ಪಡೆದವರು.

ಹೀಗೆ, ಒಬ್ಬ ಜ್ಞಾನಿಯ ಅಥವಾ ಯೋಗಿಯ ಯಾವ ಲಕ್ಷಣಗಳೂ ಇಲ್ಲದೆ ವಿಷಯಭೋಗಿಯಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ, ಚಾಮುಂಡಿ ಬೆಟ್ಟದಲ್ಲಿ ಒರಟು ಬಂಡೆಯೊಂದರ ಮೇಲೆ ಕುಳಿತಿರುವಾಗ ಅನಿರೀಕ್ಷಿತವಾಗಿ ಇವರಿಗೆ ಸಾಕ್ಷಾತ್ಕಾರವಾಯಿತು. ಆ ದಿನ, ನಿಧಾನಕ್ಕೆ ಅಲ್ಲದಿದ್ದರೂ, ಅನುಗ್ರಹ ಅವರ ಪಾಲಿಗೆ ಖಚಿತವಾಗಿ ಲಭಿಸಿತು.

ಆಧ್ಯಾತ್ಮಿಕತೆಯ ಹಾದಿಯಲ್ಲಿ ಜ್ಞಾನೋದಯವೆಂಬುದು ಮೊದಲ ಹೆಜ್ಜೆಯೇನೂ ಅಲ್ಲ. ಅದು ಕೊನೆಯ ಹೆಜ್ಜೆಯೂ ಅಲ್ಲ. ಆದರೂ, ಆ ಶಬ್ದವು ಹಿಂದೆಂದಿಗಿಂತ ಜನಮನದ ಭಾವನೆಯನ್ನು ಹೆಚ್ಚಾಗಿ ಸೆಳೆದಿದೆ. ಈ ಕೃತಿಯಲ್ಲಿ ಜ್ಞಾನೋದಯದ ವಿಷಯವಾಗಿ ಸದ್ಗುರು ನಡೆಸಿಕೊಟ್ಟ ಐದು ಸತ್ಸಂಗಗಳನ್ನು ಸಂಕಲನದ ರೂಪದಲ್ಲಿ ಕೊಡಲಾಗಿದೆ. ಇದು ಜ್ಞಾನೋದಯದ ಸಂಪೂರ್ಣ ವಿಶ್ವಕೋಶವೇನಲ್ಲ. ಅಥವಾ ಮಾರ್ಗದರ್ಶಿ ಕೃತಿಯೂ ಅಲ್ಲ, ಆದರೆ ಆ ದಿಶೆಯಲ್ಲಿ ಪಯಣಿಸ ಬಯಸುವವರಿಗೆ

ಕೆಲವು ಹೆಜ್ಜೆಗಳ ಮಾರ್ಗದರ್ಶನ ಕೊಡಬಲ್ಲದೆಂದು ಆಶಿಸುತ್ತೇವೆ.

http://www.wolfesimonmedicalassociates.com/zenegra/