https://www.rpspharmacy.com/product/malegra-fxt/

ಧ್ಯಾನಲಿಂಗ – ಗುರು ತಂದ ಗುರು [Dhyanalinga – Guru Tanda Guru]

ಧ್ಯಾನಲಿಂಗವು ಅಪರೂಪವಷ್ಟೇ ಅಲ್ಲ, ವಿಶಿಷ್ಟವೂ ಕೂಡ. ಮೊದಲನೆಯದಾಗಿ, ಧ್ಯಾನಲಿಂಗವು ಪೂಜೆ ಪ್ರಾರ್ಥನೆ ಮಾಡುವ ವಿಗ್ರಹವಾಗಲೀ, ಮಂದಿರವಾಗಲೀ ಅಲ್ಲ. ಅದೊಂದು ಆಧ್ಯಾತ್ಮಿಕ ಸೆಲೆ. ಧ್ಯಾನಲಿಂಗದ ಚೈತನ್ಯಶಕ್ತಿಗಳು ಸಾರ್ವತ್ರಿಕವಾದುದರಿಂದ ಇದರ ವ್ಯಾಪ್ತಿಯೊಳಗೆ ಬಂದ ಯಾರಿಗಾದರೂ ಪ್ರಯೋಜನವುಂಟು. ಧ್ಯಾನಲಿಂಗ ಪ್ರತಿಷ್ಟಾಪನೆಯು ಸದ್ಗುರುವಿನ ಗುರುಗಳ ಹಾಗೂ ಯೋಗ ಪರಂಪರೆಯ ಅನೇಕ ಯೋಗಿಗಳ ಕನಸಾಗಿತ್ತು. ಅದನ್ನು ನನಸಾಗಿಸಲು ಸದ್ಗುರುವಿಗೆ ಜ್ಞಾನೋದಯದ ಮೂರು ಜನ್ಮಾವಧಿಗಳೇ ಬೇಕಾಯಿತು.

ಈ ಪುಸ್ತಕದಲ್ಲಿ ಧ್ಯಾನಲಿಂಗವಷ್ಟೇ ಅಲ್ಲದೆ ಅದರ ಸೃಷ್ಟಿಕರ್ತ ಸದ್ಗುರು, ಮತ್ತು ಅವರು ಇದನ್ನು ಸಾಧಿಸಿದ ಬಗೆಗೂ ವಿವರಗಳಿವೆ. ಲೇಖಕರು ಆಶ್ರಮವನ್ನು, ಧ್ಯಾನಲಿಂಗ ಮಂದಿರವನ್ನು ಮತ್ತೆ ಮತ್ತೆ ಭೇಟಿ ಮಾಡಿ ಪ್ರತಿಷ್ಟಾಪನೆಯ ಕಾಲದಲ್ಲಿದ್ದ ಕಾರ್ಯಕರ್ತರನ್ನು, ಧ್ಯಾನಿಗಳನ್ನು ಸಂದರ್ಶಿಸಿ, ಸ್ವತಃ ಸದ್ಗುರುವಿನೊಡನೆ ಮಾತನಾಡಿ ವಿಷಯಸಂಗ್ರಹ ಮಾಡಿರುವರು. ಈ ಪುಸ್ತಕದ ಮೂಲಕ ಧ್ಯಾನಲಿಂಗದ ನಿರ್ಮಾಣದ ಹಿಂದಿನ ಆಗುಹೋಗುಗಳ – ಸದ್ಗುರುವಿನ ಪ್ರಾಣಕ್ಕೇ ಅಪಾಯ ತಂದಿದ್ದ ರಚನಾಕಾರ್ಯದ ಒಳಸಂಗತಿಗಳ – ವಿಶದ ಪರಿಚಯ ಸಿಗುತ್ತದೆ. ಲೇಖಕರು ತಮ್ಮ ಪುಸ್ತಕದ ಮೂಲಕ ನಮ್ಮನ್ನು ಈ ಮಂದಿರದ ಚರಿತ್ರೆಗೆ, ವಿಜ್ಞಾನಕ್ಕೆ, ಮಹತ್ವಗಳೊಳಗೆ ಲೇಖಕರು ಕೊಂಡೊಯ್ಯುತ್ತಾರೆ.

http://www.wolfesimonmedicalassociates.com/zenegra/