https://www.rpspharmacy.com/product/malegra-fxt/

ಅನ್ವೇಷಣೆ – ಸೃಷ್ಟಿಯಿಂದ ಸೃಷ್ಟಿಕರ್ತನೆಡೆಗೆ [Anweshane – Srushtiyinda Srushtikartanedege]

ಮಾನವನನ್ನು ಪ್ರಾಣಿಯ ಮಟ್ಟದಿಂದ ಮೇಲೆತ್ತುವ ಸಾಮರ್ಥ್ಯವೆಂದರೆ ಅವನಲ್ಲಿರುವ ಅನ್ವೇಷಕ ಬುದ್ಧಿ. ತನ್ನ ಸುತ್ತಲಿನ ಪ್ರಕೃತಿಯೊಂದಿಗೆ ತನ್ನ ಸಂಬಂಧವನ್ನು ಗುರುತಿಸಿಕೊಳ್ಳುವ, ಹಾಗೆಯೇ ಮುಂದುವರೆದು ಇಡೀ ಸೃಷ್ಟಿಯ ಕಾರ್ಯವೈಖರಿಯನ್ನು ಗಮನಿಸುತ್ತ ಅದರಲ್ಲಿನ ಕಾರ್ಯ-ಕಾರಣ ಸಂಬಂಧವನ್ನು ಶೋಧಿಸುವ ಬುದ್ಧಿ. ಈ ಸಂಕೀರ್ಣ ಸೃಷ್ಟಿಯನ್ನು ರಚಿಸಿ ವ್ಯವಸ್ಥೆಗೊಳಿಸಿದ, ಸೃಷ್ಟಿಕರ್ತನ ಬಗೆಗೆ ಯೋಚಿಸುವವರೆಗೂ, ಮಾನವನ ಅನ್ವೇಷಣೆ ಸಾಗುವುದು. ಈ ಶೋಧನಾತ್ಮಕ ಮನೋವೃತ್ತಿ ಪ್ರತಿಯೊಬ್ಬರಲ್ಲೂ ಬಾಲ್ಯದಿಂದಲೇ ಸಹಜವಾಗಿರುವುದು. ಈ ಮನೋವೃತ್ತಿಯನ್ನು ಬೆಳೆಯಗೊಟ್ಟರೆ, ಒಂದೊಂದು ಮಗುವೂ ಸಹಜವಾಗಿ ಸಕಾಲದಲ್ಲಿ ಆಧ್ಯಾತ್ಮಿಕ ಶೋಧದಲ್ಲಿ ತೊಡಗಿ ತನ್ನ ಜೀವಿತಕಾಲದಲ್ಲಿಯೇ ಆತ್ಮಸಾಕ್ಷಾತ್ಕಾರ ಪಡೆದುಕೊಳ್ಳುವ ಸಾಧ್ಯತೆಯಿದೆ.

ಒಟ್ಟಾರೆ, ಆಧ್ಯಾತ್ಮಿಕ ಅನುಭವಕ್ಕಾಗಿ ತವಕಿಸುವವರಿಗಷ್ಟೇ ಅಲ್ಲದೆ, ‘ನಮ್ಮಂತಹವರಿಗೆ ಆಧ್ಯಾತ್ಮಿಕ ಅನುಭವ ಸಾಧ್ಯವಿಲ್ಲ’ ಎಂದು ಕೈಚೆಲ್ಲಿ ಕುಳಿತವರಲ್ಲೂ ಸ್ಫೂರ್ತಿ ತುಂಬುವ ಪುಸ್ತಕವಿದು. ಲೇಖನಗಳನ್ನು ಓದುತ್ತ ಹೋದಂತೆಲ್ಲಾ, ನಮ್ಮ ಅನೇಕ ಸಂದೇಹಗಳು ನಿವಾರಣೆಯಾಗಿ, ಈ ಮಾರ್ಗದಲ್ಲಿ ಮುಂದುವರೆಯಲು ಧೈರ್ಯ ಬರುವುದು ನಿಶ್ಚಿತ. ಮಾನವಜನ್ಮದ ಏಕೈಕ ಉದ್ದೇಶವಾದ ಆತ್ಮಸಾಕ್ಷಾತ್ಕಾರದ ಕಡೆಗೆ ಸಾಗಲು ಊರುಗೋಲಿನಂತಿದೆ

http://www.wolfesimonmedicalassociates.com/zenegra/